Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೆಪ್ಟಂಬರ್‌ನಲ್ಲಿ ?ಸ್ನೇಹಿತರು
Posted date: 29 Wed, Aug 2012 ? 11:07:15 AM

ರೇಖಾಜಗದೀಶ್ ಅರ್ಪಿಸುವ, ಸೌಂದರ್ಯ ಜಗದೀಶ್ ಫ಼ಿಲಂಸ್ ಲಾಂಛನದಲ್ಲಿ ಸೌಂದರ್ಯ ಜಗದೀಶ್ ನಿರ್ಮಿಸಿರುವ ‘ಸ್ನೇಹಿತರು ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಸೆಪ್ಟಂಬರ್‌ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
     ‘ಮಸ್ತ್ ಮಜಾ ಮಾಡಿ, ‘ಅಪ್ಪುಪಪ್ಪು ಎಂಬ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿ ಜನರ ಮನ ಗೆದ್ದಿದ ಮಾ||ಸ್ನೇಹಿತ್ ಈ ಚಿತ್ರದಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
     ರಾಮ್‌ನಾರಾಯಣ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಎಂ.ಆರ್.ಸೀನು ಛಾಯಾಗ್ರಹಣ, ಗಣೇಶ್.ಎಂ ಸಂಕಲನ, ತ್ರಿಭುವನ್, ಹರ್ಷ ನೃತ್ಯ ನಿರ್ದೇಶನ, ಪಳನಿರಾಜ್, ರವಿವರ್ಮ ಸಾಹಸ ನಿರ್ದೇಶನ ಹಾಗೂ ನಂಜುಂಡಸ್ವಾಮಿ ಅವರ ಕಲಾ ನಿರ್ದೇಶನ ‘ಸ್ನೇಹಿತರು ಚಿತ್ರಕ್ಕಿದೆ.
    ವಿಜಯರಾಘವೇಂದ್ರ, ತರುಣ್‌ಚಂದ್ರ, ರವಿಶಂಕರ್, ಸೃಜನ್‌ಲೋಕೇಶ್, ಪ್ರಣೀತಾ, ಮಾ||ಸ್ನೇಹಿತ್, ಶರಣ್, ರಮೇಶ್‌ಭಟ್, ಗಿರಿಜಾಲೋಕೇಶ್, ನಿಖಿತಾ, ಶೋಭ್‌ರಾಜ್, ಬುಲೆಟ್‌ಪ್ರಕಾಶ್, ಸಿಹಿಕಹಿಚಂದ್ರು, ಸಾಧುಕೋಕಿಲಾ, ಟೆನ್ನಿಸ್‌ಕೃಷ್ಣ, ವಿ.ಮನೋಹರ್, ಮೋಹನ್‌ಜುನೇಜಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೆಪ್ಟಂಬರ್‌ನಲ್ಲಿ ?ಸ್ನೇಹಿತರು - Chitratara.com
Copyright 2009 chitratara.com Reproduction is forbidden unless authorized. All rights reserved.